ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್‌, ಉಪ ಮೇಯರ್‌ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಿಂದಲೇ ಕೊನೆಯ ಹಂತದ ಕಸರತ್ತು ನಡೆಸಿದರು. ಈಗಿದ್ದರೂ ಕಾಂಗ್ರೆಸ್‌ ಕೈಯಿಂದ ಮೇಯರ್‌ ಸ್ಥಾನ ತಪ್ಪಿದ್ದು, ಉಪ ಮೇಯರ್‌ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.


COMMERCIAL BREAK
SCROLL TO CONTINUE READING

ವಿಧಾನಸೌಧದ ಕಾರ್ಯಕ್ರಮದ ನಡುವೆ ಎರಡು ಸಲ ಎದ್ದು ಹೋಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಮೈಸೂರಿನ ಸ್ಥಳೀಯ ನಾಯಕರೊಂದಿಗೆ ಫೋನ್‌ನಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಬ್ಯಾಂಕ್ವೆಟ್ ಹಾಲ್ ಹೊರಗೆ ಬಂದು ಮಾಜಿ ಸಿಎಂ ಸಿದ್ದರಾಮಯ್ಯ ಫೋನ್‌ ಮೂಲಕ ಮೇಯರ್‌ ಪಟ್ಟಕ್ಕಾಗಿ ಕೊನೆ ಹಂತದ ಕಸರತ್ತು ನಡೆಸಿದ್ದರು.


Laxmi Hebbalkar: 'ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿದ್ದು ನಾನೇ'


ಸಿದ್ದರಾಮಯ್ಯ ಅವರ ಸಂಪರ್ಕಕ್ಕೆ ಶಾಸಕ ತನ್ವೀರ್‌ ಸೇಠ್(Tanveer Sait)‌ ಸಿಗದ ಹಿನ್ನೆಲೆ ಮಾಜಿ ಸಂಸದ ಧ್ರುವನಾರಾಯಣ ಸೇರಿ ಒಂದಿಬ್ಬರು ನಾಯಕರ ಜತೆ ಮಾತುಕತೆ ನಡೆಸಿದ್ದರು. ನೆಟ್‌ವರ್ಕ್‌ ಸಮಸ್ಯೆಯಿಂದ ಮತ್ತೆ ಮತ್ತೆ ಕಾಲ್ ಕಟ್‌ ಆಗುತ್ತಿದ್ದರೂ, ಕಾಲ್‌ ಮಾಡಿ ಮಾತನಾಡಲು ಸಿದ್ದರಾಮಯ್ಯ ಪ್ರಯತ್ನಿಸಿದ್ದರು.


HD Kumaraswamy: 'ಕಿಂಗ್ ಮೇಕರ್ ಸ್ಥಾನ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ'


ಆದರೆ, ಕೊನೆಗೂ ಜೆಡಿಎಸ್‌(JDS)ನ ರುಕ್ಮಿಣಿ ಮಾದೇಗೌಡ ಮೈಸೂರಿನ ನೂತನ ಮೇಯರ್‌ ಆಗಿ ಆಯ್ಕೆಯಾದ ಬಳಿಕ ಬೇಸರದಿಂದ ಮತ್ತೆ ಬ್ಯಾಂಕ್ವೆಟ್ ಹಾಲ್ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ವಾಪಸ್ ಹೋದರು.


JOBS: ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಭಾರೀ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆ(Mysuru city corporation) ಮೇಯರ್‌ ಚುನಾವಣೆಯಲ್ಲಿ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ನೂತನ ಮೇಯರ್‌ ಆಗಿ ಆಯ್ಕೆಯಾದರೆ, ಕಾಂಗ್ರೆಸ್‌ನ ಅನ್ವರ್‌ ಬೇಗ್‌ ಉಪ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಮೇಯರ್‌ ಕನಸು ಕಾಣುತ್ತಿದ್ದ ಬಿಜೆಪಿ ನಿರಾಸೆ ಅನುಭವಿಸಿತು.


Election Commission: ರಾಜ್ಯದಲ್ಲಿ 110 ಜಿಲ್ಲಾ ಪಂ. ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.